Wednesday, October 16, 2019

"ಜೀವನ ವಿಧಿಯ ನಡುವೆ ಹೊರಟ ಅಷ್ಟೆ"


ಧನˌ mobile ಗೆ ಇರುವ ಬೆಲೆ ಮನುಷ್ಯರಿಗೆ ಇದಿದ್ದರೇ ಈ ಕಾಲದಲ್ಲಿ ಮನುಷ್ಯನು ಉತುಂಗಕ್ಕೆ ಏರುತ್ತಿದ್ದˌ ನಿರ್ಮಲ ಜೀವನ ನಡೆಸುತ್ತಿದ್ದˌ ಇದು ಹಿಂದೆ ನಡೆಯುತ್ತಿತ್ತು ಅದರೆ ಈಗ ಎಲ್ಲವೂ ಕಾಲ್ಪನಿಕ ಪ್ರಪಂಚˌ ಹಣ ಹಣ ಹಣ mobile mobile mobile ಜೊತೆಗೆ ಬರಿ ಸ್ವಾರ್ಥ ಸ್ವಾರ್ಥ ಸ್ವಾರ್ಥˌ ಸ್ವಲ್ಪವೂ ಕಾಳಜಿ ಇಲ್ಲದ ಸಮಾಜ.
ಇವುಗಳ ಮೇಲೆಯೇ ನಡೆಯುತ್ತಿದೆ ಈಗಿನ ಜೀವನ ಮತ್ತು ಬದುಕು.
ಯಾವ ವಿನಾಶಕ್ಕೋ ಗೊತ್ತಿಲ್ಲ.!!!
ಸಂಬಂಧಗಳಿಗೆ ಬೆಲೆಯು ಇಲ್ಲˌ ಅರ್ಥನು ಇಲ್ಲˌ ಅದರಿಂದ ಎಷ್ಟೋ ಜನರ ಜೀವನ ಅವನತಿ ಕಡೆಗೆ ಮುಖ ಮಾಡಿವೆ. ಆದರು ಅರ್ಥವಿಲ್ಲದೆ ಜೀವನ ನಡೆಸುತ್ತಿದ್ದರೆˌ ಯಾವ ಪುರುಷಾರ್ಥಕ್ಕೋ ಗೊತ್ತಿಲ್ಲ.
ಕಾಲ್ಪನಿಕ ಜೀವನದಲ್ಲಿ ನಾನುˌ ನನ್ದುˌ ನನಗೆˌ ನಾನೇˌ ನನ್ನಿಂದಲೇ ಸಮಾಜ ಅಂದು ಅಂದು ಮರೆತು ಬಿಡುತ್ತಾರೆ ಇತರರಗಾಗಿ ಬಾಳುವುದುˌ ಸೇವೆˌ ನಿಸ್ವಾರ್ಥˌ ಕಾಳಜಿ ಇದೇ ಶಾಶ್ವತವೆಂಬುದು ಅರಿವೇ ಇಲ್ಲˌ ಸ್ವಾರ್ಥ ಜೀವಿಗಳಿಗೆ.
ಬಾಳು ಮಾದರಿಯಾಗಬೇಕು ಹೊರತು ಹಾಳಾಗಬಾರದುˌ ಹಾಳುಮಾಡಬಾರದು.
-------------------------------------------------------------------

August 29,2019 ರಾತ್ರಿ 11:20.
ನಾ ನಮ್ಮ ತಂದೆ ಕಳೆದುಕೊಂಡ ದಿನ.

ನಮ್ಮ ತಂದೆ ನಡೆದ ಜೀವನ ಸ್ಪೂರ್ತಿದಾಯಕˌ
ನಮ್ಮ ತಂದೆ ನೆನಪಿನಲ್ಲಿˌ

ಎರಡು ದಿನದ ಬದುಕು ಇದು ಎರಡು ಅಲೆಗಳ ಸಾಗರ ಎರಡು ಪದದ ಪ್ರೀತಿ ಅದು ಅದರ  ಹೆಸರೆ ನನ್ನ ಅಪ್ಪ "ಶಂಕರ".

"ಜೀವನ ವಿಧಿಯ ನಡುವೆ ಹೊರಟ ಅಷ್ಟೆ".

ಅಪ್ಪನದು ವಿಶ್ವಾಸ ಹೇಗೆ ಎಂದರೆ ಅಮ್ಮನನ್ನು First shift ಇದ್ದರೆ ಮಧ್ಯಾಹ್ನ ಶಾಲಾ ವಾಹನ ಇಳಿದ ಮೇಲೆ ಕರೆಕೊಂಡು ಬರುವುದುˌ Second shift ಇದ್ದರೆ ಬೆಳಿಗ್ಗೆ ಶಾಲಾ ವಾಹನಕ್ಕೆ ಹತ್ತಿಸುವುದು ಅವರ  ಅಭ್ಯಾಸ.
ಅಂದು ಬೆಳಿಗ್ಗೆ ನಮ್ಮ ತೆಂಗಿನ ಮರದ ತೆಂಗಿನಕಾಯಿ ಕೀಳಿಸಿದರುˌ ಗೌರಿ-ಗಣೇಶ ಹಬ್ಬಕ್ಕೆˌ ಅಮ್ಮನಿಗೆ ಹೇಳಿ ಬಿಸಿಬೇಳೆಬಾತ್ ಮಾಡಿಸಿದ್ದರುˌ ನಂತರ ಅಮ್ಮನನ್ನು ಶಾಲಾ ವಾಹನ ಬರುವ ಸ್ಥಳಕ್ಕೆ ಬಿಟ್ಟುಬಂದರುˌ ತೆಂಗಿನಕಾಯಿಯನ್ನು ಸುಲಿದರುˌ ನಾ ಚಿಲಾಕ್ಕೆ ತುಂಬಿದೆˌ ನಾ officeಗೆ ರೆಡಿ ಅದೆˌ ಸ್ನಾನˌ ಪೂಜೆ ಮಾಡಿˌ ತಿಂಡಿ ಮಾಡಿದೆ.
ಅವರಿಗೆ Second shift ಇದ್ದಾಗ ಬೆಳ್ಳಗ್ಗೆ ನಾ ಕಾಫೀ ಒಟ್ಟಿಗೆ ಮಾಡಿ ಕುಡಿಯುವ ಅಭ್ಯಾಸˌ office ಹೊರಡುವ ಮುನ್ನˌ ಅವತ್ತು ಅದೇ ಆಯ್ತು ನಾ office ಹೊರಟೆ ನಗುತ್ತಲೆˌ ಕಿಚಾಯಿಸಿ ಕಳುಹಿಸಿದರು. ನಂತರ cityಗೆ ಹೊಗಿ ಹಬ್ಬಕ್ಕೆ ಕಾಯಿಮೇಲೆ ವಿವಿಧ ಹಣ್ಣುಗಳನ್ನು ತಂದಿದ್ದರು.
ಪೋನ್ use ಮಾಡ್ತಿರ್ಲಿಲ್ಲˌ ನಮ್ಮ ಪಕ್ಕದ ಮನೆಯವರಿಗೆ ಪೋನ್ ಮಾಡಿ ಕೇಳಿದೆ ಅವರು Uncle ಇಲ್ಲ ಹೊರಗಡೆ ಹೋಗಿದ್ದರೆ ಎಂದ್ದರುˌ ಪೊನ್ ಮಾಡ್ಸತೀವಿ ಅಂದ್ರುˌ ಬರಲಿಲ್ಲˌ Duty Time ಆಗಿದೆ ಹೋಗಿದ್ದರೆ. ರಾತ್ರಿ ನಾ ಬಂದೆ officeˌ Strain ಅಗಿತ್ತುˌ ಅಮ್ಮನಿಗೆ ಅಪ್ಪ duty ಇಂದ ಬಂದ್ಮೇಲೆ ನೋಡ್ಕಿಲಿ ಅಂದೆˌ ಆಯ್ತು ಅಂದ್ರು. ಅವರು Second shift ಇದ್ದಾಗ ಅವರು ಬಂದ್ಮೇಲೆ ಕಾಫೀ ಕುಡಿಯುತ್ತಿವಿ ಮೂವರು almost regularly.ಯಾವಗಲೂ Second shift 11:00 siren ಅದ್ರೆ 11:07 ಅಥವಾ 11:10 ಕ್ಕೆ ಮನೆˌ ಅದರೆ ಅವತ್ತು 11:15 ಬಂದಿಲ್ಲˌ ಬರುತ್ತಾರೆ ಮಾತಾಡ್ಕೊಂಡು ಅಂತಾ. 11:20 call ಬರುತ್ತೆˌ ನಾಯಿ ಅಡ್ಡ ಬಂದು ನಿಮ್ಮ ತಂದೆ ಬಿದ್ದಿದ್ದರೆ scooter ನಿಂದ ಅಂತಾˌ ನಾವೂ ಮಾಮುಲಿ ಇವರದು ಬೀಳುವುದು-ಏಳುವುದು ಅಂತಾ ಬೇಗ ಹೋಗಿ ನೋಡಿದರೆ ಅವರು Ambulance ನಲ್ಲಿ ಮಲ್ಗಸಿದ್ರುˌ ಯಾವುದೇ ಚಲನವಲನ ಇರಲ್ಲಿಲ್ಲˌ ಎಲ್ಲ ಅವರ ಸಹೋದ್ಯೋಗಿಗಳು ಸಹಾಯದಿಂದ Company ambulence ನಲ್ಲಿ Kamakshi Hospital ಕರೆಕೊಂಡು ಹೋದರು. ನಾ ಬಂದು ಅಮ್ಮನಿಗೆ ಪ್ರತಿ ಸಲದಂತೆ ಈಸತಿ ಇಲ್ಲ ಪರಿಸ್ಥಿತಿ ಕೈ ಮೀರಿದೆ ಅಂತಾ ಹೇಳಿದೆ ಅವರು ಇಲ್ಲ ಅವರು ಸ್ವಲ್ಪ ಹಾಗೇ ಅಲ್ವ ಅಂತಾ flask, water bottle, panche, ಎಲ್ಲ ತೋಗೊಂಡು ನಡಿ ಎಂದರುˌ ಹೋದ್ವಿ.
ನಾವೂ ಹೋಗುವಷ್ಟರಲ್ಲೆ Kamakshi hospital ನ Emergency ನಲ್ಲಿ ಕೈ ಕಟ್ಟುತ್ತಿದ್ದರುˌ ಎಲ್ಲವೂ ಅವನ ಇಚ್ಛೆಯಂತೆ ನಮ್ಮ ತಂದೆಯ ಜೀವನ ಮುಗಿದಿತ್ತು. 
ಇಷ್ಟೆ ಜೀವನ ಬೇರೆನಿಲ್ಲˌ
ಇಲ್ಲವನ್ನು ಇಲ್ಲೆ ಬಿಟ್ಟು ಹೊರಡುವುದು.
ಋಣಮುಕ್ತರಾದರು ಅಷ್ಟೆ.

ಬ್ರಾಹ್ಮಣನಾಗಿ ಹುಟ್ಟಿˌ ಬೆಳೆದುˌ ಜೀವನ ನಡೆಸಿˌ ಯಾವ ಜಾತಿ ಭೇದವಿಲ್ಲದೆ ಎಲ್ಲಾರ ಕಷ್ಟಗಳಿಗೆ ಸ್ಪಂದನೆ ಕೊಟ್ಟುˌ ನೋವಿನಲ್ಲಿ ಬಾಗಿಯಾಗಿ ಸ್ಪಂದಿಸಿದ ವ್ಯಕ್ತಿ. ಸತ್ತವರˌ ಹುಷಾರಿಲ್ಲದವರ ಮನೆಯವರಿಗೆ ಮೊದಲು ನಿಂತು ಹೆಗಲು ಕೊಟ್ಟು ಸಹಾಯ ಮಾಡಿದ್ದ ವ್ಯಕ್ತಿತ್ವ ಅಪ್ಪನದ್ದು.

ತನ್ನವರಿಗಾಗಿˌ ಜನರಿಗಾಗಿˌ ಜನರಿಗೋಸ್ಕರˌ ತನ್ನವರಿಗೋಸ್ಕರ ತಾನು ತನ್ನ ಜೀವನವ ನಡೆಸಿದರುˌ ಅದು ಹೆಮ್ಮೆ ಹಾಗೂ ಧನ್ಯತೆ.

ಅದೇ ಜನರು ಅವರಿಗೋಸ್ಕರ ತನ್ನ ಅಂತ್ಯದಲ್ಲಿ ಕೊಟ್ಟ ಒಂದು ನಮನ ಹೇಳತಿರದು.
ಸುಮಾರು ೧೫೦೦-೨೦೦೦ ಜನ ಇದ್ದರು ಅಂದುˌ ಯಾರು ಸುಮ್ಮನೆ ಬಂದವರಲ್ಲ.

ಅವರ ಸ್ವಭಾವˌ ಪ್ರೀತಿ ಅಭಿಮಾನಕ್ಕೆ ಬಂದವರು.

ಎಲ್ಲಾ ಅವರ ಸ್ನೇಹಿತರು ಮತ್ತು  ನಮ್ಮ ಸ್ನೇಹಿತರುˌ Automotive Axles Pvt.Ltd ಸಹೋದ್ಯೋಗಿಗಳುˌ Union Team, Management Team, ಬಂಧುಮಿತ್ರರುˌ ಶ್ರೀರಾಮಕೃಷ್ಣ ಆಶ್ರಮ ಮತ್ತು ಮಠದ ಯತಿಗಳುˌ ಅಲ್ಲಿನ Devotees ಮತ್ತು Volunteers, ಮನೆಯವರುˌ ಅಕ್ಕ ಪಕ್ಕದವರುˌ ಊರಿನ ಜನ ಅವರ ಸಹಾಯಕ್ಕೆˌ ನಾವೂ ಎಂದಿಗೂ ಚಿರಋಣಿ.

ನನ್ನಪ್ಪ ಯಾವಾಗಲು ಜೀವಂತ ನಮ್ಮೊಂದಿಗೆ.
#ಅಂತರಾತ್ಮ

😪😪😪