Monday, August 24, 2020

ಬದುಕುಭಮ್ರೆಯಲ್ಲ


ತೊಟ್ಟ ಉಡುಪಿಗೆˌ ಮುಖದ ಮೇಲಿನ ಬಣ್ಣಕ್ಕೆˌ ಜೇಬಿನೊಳಗಿನ ಹಣಕ್ಕೆ ಮಾರುಹೋಗುವ ಜಗದೊಳಗೆˌ ಬರೀ ನಿಷ್ಕಾಮ ಕರ್ಮದ ಬದುಕು ಭಾವನೆಗಳೊಂದಿಗೆ.

#ಬದುಕುಭಮ್ರೆಯಲ್ಲ

Tuesday, May 19, 2020

ಮೌನವೆಂಬ ಪ್ರಪಂಚದಲ್ಲಿ ನೀರವಮೌನ


ಮೌನದ ಪ್ರಪಂಚವೇ ಚೆಂದ ಯಾರೊಡನೆಯೂ ಅಷ್ಟೊಂದು ಮಾತಿಲ್ಲˌ ಕಥೆಯಿಲ್ಲˌ ನಗುವಿಲ್ಲˌ ಅಳುವಿಲ್ಲˌ 
ನೆನಪಿನಂಗಳವಷ್ಟೆ. ಜೀವನೋತ್ಸಾಹˌ ಜುಗುಪ್ಸೆಗಳು ಗೊತ್ತಗುತ್ತಿಲ್ಲ ಏನೋ ಬದುಕಿದ್ದರು ಸತ್ತಂತೆಯಿದೆ ಜೀವˌ ಜೀವನ ಉದ್ದಕ್ಕೂ ನೋವು- ನಲಿವು ಅಲ್ಲಿ ಅಂದುಕೊಂಡಿದ್ದುˌ ಅಂದುಕೊಳ್ಳುವುದು ಯಾವುದಿಲ್ಲ. ಬದುಕಿನ ಜೀವನ full oscillatingˌ like windows door close open close open, ಟಪಟಪ ಟಪಟಪ ಅಂತ. ಮನವೂ ಹೆಚ್ಚು ಭಾರವಾಗಿ ಹೋಗಿದೆ ಮನಸ್ಸಿನ ಮನವು ಸೋತಿದೆˌ ಅದು ಉಳಿಯಬಲ್ಲದೆ..!?ಬದುಕ ಉಳಿಸಬಲ್ಲದೆ..!? ಪ್ರಶ್ನೆಗೆ ಉತ್ತರವಿಲ್ಲ ಎಂಬಂತಾಗಿದೆˌ ಏನೂ ಗೊತ್ತಾಗದಂತಾಗಿದೆ.

ಪೂರ್ವಚಂದ್ರ ತೇಜಸ್ವಿರವರು ಹೇಳಿರುವಂತೆˌ "ಮಾತನಾಡುವಷ್ಟೇ ಮಾತನಾಡದೆ ಇರುವುದೂ ಅಗತ್ಯ ಅವಾಗ ನಮ್ಮ ಮಾತಿಗೆˌ ಮೌನಕ್ಕೆ ಅರ್ಥಬರುತ್ತದೆ".

ಈ ಬದುಕು ದ್ವಂದ್ವಮಯವಾಗಿದೆˌ ಅವರಿಸಿದ ಮೌನವೇ ನೀನೆಷ್ಟು ಚೆಂದ.

Saturday, April 25, 2020

ಆತ್ಮಪೂರ್ವಕ






 

ಕ್ಷಣಿಕದ ಬದುಕು ಏನೋ ಗೊತ್ತಿಲ್ಲ ಹೇಗೆಂದುˌ ಇದು ಇಂದಿನ ಬದುಕು ಅನುಭವಿಸಬೇಕು ಬೇಕೆಂದರೂ ನಾಳೆ ಸಿಗದುˌ ಅಷ್ಟು ಪರಿಚಯವಿದ್ದರು ಜಗದೊಳು ಎಲ್ಲ ತುಂಬ ವಿರಳವಾದ ಬದುಕು ಎಂತಾ ವಿಚಿತ್ರ ಅನಿಸುತ್ತದೆˌ ನೀ ತಿಳಿಸಿ ಹೇಳಿದ ಎಲ್ಲವನ್ನು ಅರ್ಥಮಾಡಿಕೊಳ್ಳುತ್ತಿರುವೆನು ನಾˌ ನೀ ಬಂದು ತಿದ್ದಿˌ ತೀಡಿˌ ತಿಳಿಸಿˌ ಹೇಳಿಕೊಡು ಈ ಹುಡುಗನಿಗೆ ಜೀವನದ ಮತ್ತಷ್ಟು ಪಾಠವ. ನೀ ಹೇಳಿಕೊಡುವ ತಪ್ಪು ಒಪ್ಪುಗಳ ನಡುವೆ ಬದುಕು ನಡೆದಿದೆ. ನೀ ಸದಾ ಹೇಳುವ ಹಾಗೆ ಭಗವಂತ ಇಚ್ಛೆ ಏನಿದೆಯೋ ಅದೆ ಆಗುತ್ತದೆಂದುˌ ಅದು ಅಕ್ಷರ ಸಹ ಸತ್ಯ ಆದರೆ ನಾ ಕೂಡ ಸದಾ ಹೇಳುತ್ತಿರುವೆ ಭಗವಂತನೇ ನಿಮ್ಮನ್ನು ಕಳುಹಿಸಿರುವುದೆಂದು. ನನ್ನ ಮನˌ ಜೀವನ ನಿನಗೆ ಎಂದೆಂದೂ ಸಮರ್ಪಿತˌ ನೀ ಎಂದು ಪರಕೀಯಳಲ್ಲ ಈ ಜೀವಕ್ಕೆ ಜೀವನಕ್ಕೆˌ ಈ ಬದುಕ ಮುನ್ನುಡಿ ನೀ ಸದಾˌ ನನ್ನಸಿರ ಏರಿಳಿತಗಳು ನೀನೆ ಆಗಿಯೇˌ ನೀನಿರದೆ ಈ ಬಾಳ ಪಯಣದಲಿ ನಾ ಇರ್ತಿನಿ ಇಲ್ಲವೊ ಎಂಬ ಭಾಸವಾಗಿದೆ. ನಿದ್ದೆಯಲ್ಲೂ ಸಹ ನಿನ್ನದೆ ಕನವರಿಕೆˌ ನನ್ನ ಎಲ್ಲವೂ ನೀ ಆಗಿಹೇ ಅಮ್ಮನ ಜೊತೆಗೆˌ ನಿನ್ನನುಪಸ್ಥಿತಿ ಕಾಡಿದೆ. ಇದು ಯಾವುದು ಕಲ್ಪನೆಯು ಅಲ್ಲˌ ಆಸೆಯಂತು ಮೊದಲೇ ಇಲ್ಲˌ ನನ್ನ ವಾಸ್ತವಿಕತೆಯ ರೂಪವಿದು. ಆದರೆ ಬಲವಂತವೆನಿಲ್ಲ ಹೇಳಿದ ಹಾಗೆˌ ತಿಳಿದಿರುವೆ ನಿಮ್ಮದು ಜೀವನವಿದೆ ಆಸೆˌ ಆಕಾಂಕ್ಷೆ ಬಹಳವಿರುತ್ತದೆಂದು. ನೀನಿರದೆ ಹೋದರೆ ಬೇಸರವಾಗುವುದಿಲ್ಲ ಅಂತೇನಿಲ್ಲ ಆದರು ಸುಮ್ಮನಿರುವೆ ಮೌನಿಯಾಗಿˌ ಕಾದಮೇಲೂ ಹೀಗೆ ಈ ಮೌನ ಸದಾ ಮೌನದಿಂದಿರುವೆ ಇಚ್ಛೆಯೇ ಎಂದಿಗೂ.

ಮೂಡಣದಲಿ ರವಿ ಮೂಡಿ ಬರಲು ನನ್ನ ಮನಕ್ಕೆ ನೀ ಬೆಳಕತರಲುˌ ತಂಪಾದ ಗಾಳಿ ಬಿಸುತ್ತಿರಲು ನೀ ಬದುಕ ಪ್ರವೇಶಿಸಲುˌ ಕೋಗಿಲೆಯ ಇಂಪಾದ ಧ್ವನಿ ಕೇಳಿಬರಲು ನೀ ಮಾತನಾಡುತಿರಲುˌ ಎಲ್ಲ ಕ್ಷಣಕ್ಕೂ ನೀ ತೋರಿದ ನಿಮ್ಮ ಹೃದಯವಂತಿಕೆಯ ಮನಕೆ ಎಷ್ಟು ಋಣಿಯೇ ಗೊತ್ತಿಲ್ಲ.!!

#ಹೃದಯವೆಹೇಳಿದೆನೀನನ್ನಜೀವನದಆಯಾಮ

Friday, April 17, 2020

ನನ್ನ ಬದುಕಿನ ಪರಿಪೂರ್ಣತೆ ನೀವೂ ಸದಾ ಎಂದೆಂದಿಗೂ.


ಮನವೆಂಬ ಆಗಸಕೆ ಆಲೋಚನೆಯ ಎಂಬ ಕಲ್ಲು ಎಸೆದು ಪೂರ್ವದಲ್ಲಿ ಒಮ್ಮೆಯಾದರು ಯೋಚಿಸು ಮನವೇ ಬದುಕು ಏಕೆ ಹೀಗೆಂದು. ಪ್ರತಿಕ್ಷಣವು ನಿನ್ನೆ ಯೋಚಿಸುವ ನನಗೆ ಮನಃಪೂರ್ವಕವಾಗಿ ನಿನ್ನೊಡನಾಟದ ಕಲ್ಪನೆಗಳೇ ಮನದ ತುಂಬ. ಭಾವನೆಯ ಜೀವನವಲ್ಲ ಈ ಬದುಕು ಕನಸಲ್ಲ  ನನಸಾಗಲಿಕ್ಕೆˌ ಇದು ಬಂಧ ಒಂದು ಸುಂದರ ಅನುಬಂಧ ವಾಸ್ತವದ ರೂಪ ಅನಿಸಿದೆ. ಒಂದಿಷ್ಟು ಮುನಿಸು ಯಾವಾಗಲುˌಹೊಂದಾಣಿಕೆ ಅನಿಸುತ್ತೆˌ
ಕಾಳಜಿˌನಂಬಿಕೆˌ ಪ್ರೀತಿˌ ಸಲುಗೆˌ ಬಹಳ ಹಡೆˌ ಅನಿವಾರ್ಯತೆ ನಡುವೆ ತುಂಬ ನಿರೀಕ್ಷೆಗಳಿಲ್ಲದ ಬದುಕು ನಮ್ಮದಾಗಲಿ ಸದಾˌ ಜೊತೆಗೆ ಸ್ನೇಹ-ಪ್ರೀತಿ ಯಾವಾಗಲು ಬೇಡುವ ಭಿಕ್ಷೆಯಾಗಬಾರದಂತೆˌ ಗೌರವವಾಗಬೇಕು. ಆದರೆ ನಾ ನಿನ್ನೆಯ ಪ್ರೀತಿಯ ಭಿಕ್ಷೆಯ ಕೇಳುತ್ತಿರುವ ಭಿಕ್ಷುಕ ಅಷ್ಟೆ. ಆದರು ನೀ ಏಕೆ ಹೀಗೆ ಕಾಡುವೆ ಅರ್ಥಮಾಡಿಕೊಂಡು ಬಂದು ಬಿಡಬಾರದೆ ಸತಾಯಿಸದೆ ಈ ಹುಡುಗನ ಮನೆಯ ಬೆಳಕಾಗಿˌ ಅವನ ಬಾಳಿಗೆ ಬಾಳಸಂಗಾತಿಯಾಗಿ.
ನಿನ್ನ ಆಗಮನದ ಕಾತುರ ಬಹಳವಾಗಿದೆ.
ನಿನಗೆಂದೇ ಕಾದಿರುವೆ ಈ ಬದುಕಿನ ಪಯಣದಲಿˌ ನೀ ಬರುವ ನಿರೀಕ್ಷೆಯಲಿ...!

#ಹೃದಯವೆಹೇಳಿದೆನೀನನ್ನಜೀವನದಆಯಾಮ

Monday, April 13, 2020

ನಿನ್ನ ಮನ ನನ್ನರಿಯದೆ.!?

ನೀ ಏಕೆ ಪುನಃ ಪುನಃ ಕಾಡಿದೆ...


ನಿದ್ದೆಯ ಕನಸಲಿ ಏಕೆ ಎಬ್ಬಿಸಿದೆ ನಿನ್ನ ಗುಂಗಿನಲ್ಲಿ ಅಲೆಯುತ್ತಿರುವೆ ಸದಾ ಹೊಸದೊಂದು ಲೋಕದಿˌ  ಇಂದಿನಂತೆ ಮರುಕ್ಷಣವಿಲ್ಲ ಅದನ್ನು ಅರಿತು ಬಾಳೋಣ ಎಂದು ಯಾವುದಕ್ಕು ಕಿವಿಕೊಡದೆˌ ನೆನ್ನೆ ನಾಳೆಗಳ ಮರೆತು ಇಂದಿನ ಸಮತೋಲನದಲಿˌ ಖುಷಿಯಲಿ ಗುನುಗುತ್ತˌ ಹಡೆಮಾಡುತ್ತˌ ಜಗಳವಾಡಿˌ ಸಹಿ-ಕಹಿ ಹಂಚಿಕೊಳ್ಳುತ್ತˌ ಸಂಯಮದಿಂದ ಇರುವ ಎಂದಿಗೂ ಹೀಗೆ. ನನ್ನ ಮನವ ಒಮ್ಮೆಯಾದರು ಅರ್ಥಮಾಡಿಕೊಳ್ಳುತ್ತಿಯೆಂದು ಹಾಗೆ ಬದುಕಿನ ಆಯಾಮವನ್ನು ರೂಪಿಸಿˌ ಕಟ್ಟಿˌ ನಿರೂಪಿಸುವ ನಾವಿಬ್ಬರು ಒಟ್ಟಿಗೆ ಬಾಳಪಯಣದಲ್ಲಿ. ಇದು ಭಾವನೆಯಲ್ಲˌ ಕನಸಲ್ಲˌ ಆಸೆಯಲ್ಲˌ ಇಚ್ಛೆಯಲ್ಲˌ ಅಭಿಪ್ರಾಯವು ಅಲ್ಲˌ ಇದು ಒಂದು ಭಾವಪೂರ್ಣ ಬಂಧ, ಅನುಬಂಧ. ಎಲ್ಲ ಅರಿವಿದ್ದರು ಅರಿವಿಲ್ಲದ್ದವರ ಹಾಗೆ ನೀ ಇರಬೇಡ ಎಂದು. ಸದಾ ನನ್ನ ಮನವ ನಿನಗೆ ಮುಡಿಪಿಟ್ಟಿದ್ದೇನೆˌ ನನ್ನ ಮನ ಸೆರೆ ಹಿಡಿದಿದೆ ನಿನ್ನˌ ನನ್ನ ಮಡದಿಯಾಗಿ ನನ್ನ ತಾಯಿಯಾಗಿˌ ನಮ್ಮ ಪ್ರೀತಿಯ ಮನೆಯ ಒಡತಿಯಾಗಿˌ ದೀಪ ಬೆಳಗಿಸುವೆಯಾ ಎಂದು..? ನಿಮ್ಮ ಅಪರಿಮಿತ ಹೃದಯವಂತಿಕೆಗೆ ಸದಾ ಧನ್ಯೋಸ್ಮಿ.


#ಹೃದಯಹೇಳಿದೆನೀನನ್ನಜೀವನದಆಯಾಮ


Tuesday, April 7, 2020

ಚಲಿಸುವ ಕಾಲದಲ್ಲಿ ದುಃಖದಲ್ಲಿˌ ನೋವಿನಲ್ಲಿ ನಗುತ್ತಿರುವವನು.

ಕನಸಾಗೆ ಉಳಿದಳು ಜೀವನದ ಕಾಲಘಟ್ಟದಲ್ಲಿ.!?😓😓😓

ನಾ ಅಂದುಕೊಂಡ ಹಾಗೆ ಜೀವನದಲ್ಲಿ ಏನು ನಡೆಯುತ್ತಿರಲಿಲ್ಲ, ಜೀವನದಲ್ಲಿ ದೊಡ್ಡ ಕಹಿ ಘಟನೆ ಇತ್ತೀಚಿಗೆ ಅಂದರೆ ಏಳು ತಿಂಗಳಿಂದೆ ಅಪ್ಪನ ಕಳೆದುಕೊಂಡಿದ್ದು. ಬದುಕು ಹೇಗೆ ಕರೆದುಕೊಂಡು ಹೋಗುತ್ತೋ ಹಾಗೆ ಹೋಗಬೇಕೆಂಬುದು ಅಷ್ಟೆ ಅಲ್ವ ಅಂತಿದ್ದೆ. ನೀ ಹಾಗೆ ಬಂದೆ ತಿಳಿಯದೆˌನೋವಿನಲ್ಲಿ ಇದ್ದ ನನಗೆˌನೀ ಹೇಳಿದ ಸಾಂತ್ವನˌಧೈರ್ಯˌಜೊತೆಗೆ ಆ ನಿಮ್ಮ ಮಾತುಗಳುˌ ಅಂಕಣಗಳು ನನಗೆ ಯಾವಾಗಲು ಬಹಳ ಜೀವ ತುಂಬಿದೆ. ಆದರೆ ಜೀವನದಲ್ಲಿ ಅದನ್ನು ತಿಳಿದ್ದಿದರುˌ ಅನುಭವಿಸಿದ್ದರು ಏನೋ ಅತಿಯಾದ ಒಂದು ಬಂಧವ ಅನುಬಂಧವ ನನ್ನಲ್ಲೇ ಬೇಳೆಸಿ ಪೋಷಿಸಿದೆˌ ನಿನಗೆ ನೇರವಾಗಿ ತಿಳಿಸದೆ ಇದ್ದರುˌ ಅದನ್ನೂ ನೀ ಅರಿತು ಸುಮ್ಮನೆ ಇರುವೆಯಲ್ಲ ಅರಿವಿದ್ದರು ಅರಿವಿಲ್ಲದ ಹಾಗೆ. ನೀ ಹೇಳುವ ಹಾಗೆˌ ಆಪ್ತರು ಹೇಳುವ ಹಾಗೆ ನನ್ನ ಅತಿಯಾದ ಚಿಂತನೆˌ ನನ್ನ ತಪ್ಪುಗಳನ್ನು ಬಂದು ತಿದ್ದುತೀಡುತ್ತಿಯೆˌನನ್ನ ಬದುಕಿನಲ್ಲಿ ಬದಲಾವಣೆ ತರುತ್ತಿದ್ದ ನೀನುˌಮುಂದೇನು ತರುತ್ತಿಯ ಎಂದೆ ಭಾವಿಸಿದ್ದೆ. ನನಗೋ ಜೀವನದ ಆಯಾಮದಲ್ಲಿ ನನ್ನ ತಾಯಿ ಜೊತೆ ನೀ ಸಹ ಜೀವನದ ಎಲ್ಲವು ನೀನೆ ಆಗಿಯೆ. ಬದುಕಿನ ಬಂಧವ ಅನುಬಂಧವ ಪೋಷಿಸಿದ್ದ ನನಗೆ ಇದ್ದಿದ್ದು ಒಂದೇ ಅವರು ಬದುಕಿನಲ್ಲಿ ಜೊತೆಯಾಗಿರಬೇಕು ಹಾಗೆ ಜೋಪಾನವಾಗಿ ಕಾಪಾಡಲೇಬೇಕೆಂಬ ಹಠ ತೊಟ್ಟಿದುˌಆದರೆ ಎಲ್ಲವೂ ಏನೋ ಹುಸಿಯಾದಂತಿದೆ.

ಇಷ್ಟೆˌ ನಿನ್ನಲ್ಲಿ ಸಣ್ಣ ಬದಲಾವಣೆ ಕಂಡಿಯೆ ಎರಡು  ದಿನಗಳಿಂದ ಈಚೆಗೆ ಏಕೋ ಗೊತ್ತಿಲ್ಲˌ ಕೇಳಿದರೆ ನೀ ಉತ್ತರವಿಲ್ಲ ನನ್ನಲ್ಲಿ ಅಂದಿಯೆ. ದೂರವಿರು ಅಂತ ಏನೋ ಮಾತಿನ ಭಾವದಲ್ಲಿ ಎಲ್ಲವನ್ನು ತಿಳಿಸಿಯೆ ಎನ್ನುವ ಭಾಸˌಏನೋ ನನಗೆ ಒಂದು ಅರಿವಿಲ್ಲˌ ನಿನ್ನ ಮಾತಿನ ಧಾಟಿˌ ನಿರೀಕ್ಷೆಯಿಲ್ಲದ ಸ್ವಭಾವ ತೋರಿದೆˌ ಸಿಡಿಲು ಬಡೆದಂತಾಯಿತು ನನಗೆ ಮನದಲಿˌ ಆದರೆ ಉತ್ತರವಿಲ್ಲ ಅಂದಿಯೆˌ ಅದೇನೋ ಈ ರೀತಿ ಹೇಳಿದೆ everything ll okˌ ಇನ್ನು ಏನೇನೋ ಹೇಳಿದೆ. ಅದರೆ ನೀ ಹೇಳಿದೆ ಪ್ರಶ್ನೆಗಳಿದೆ ಅಂತ.? ಆದರೂ ಪ್ರಶ್ನೆ ಸಹ ಬರಲಿಲ್ಲˌ ಜೊತೆಗೆ ನನ್ನಿಂದ ತೊಂದರೆ ಅಗುತ್ತಿದೆ ನಿನಗೆ ಅಲ್ವ ಅಂತ ಮಾತು ಬಂತುˌನೀ ಈ ರೀತಿ ಮುಂಚೆ ಹೀಗೆ ಇರಲಿಲ್ಲˌ ಮಾತು ಸಹ ನಾ ಕಂಡಂತೆ ಈ ತರಹ ಆಡಿರಲಿಲ್ಲ ಖಂಡಿತವಾಗಿˌ ಸತ್ಯವಾಗಿ. ನಿನಗೆ ನಾನೇ ತೊಂದರೆ ಕೊಡುತ್ತಿರುವ ಹಾಗೇ ಕಾಡುತ್ತಿದೆ ನನ್ನಲ್ಲಿ. ತಿಳಿದಿಯೆ ನಿಮಗೂ ನಿಮ್ಮ ಜೀವನವಿದೆ ಎಂದುˌ ಬದುಕಿನಲ್ಲಿ ಇಚ್ಛೆˌ ಇಷ್ಟೆ ಇದ್ದೆ ಇರುತ್ತದೆ ಎಂದುˌಮೊದಲೇ ಈ ರೀತಿ ಮಾತು ಆಡಿದ್ದಿರೀˌ ತೊಂದರೆ ನನ್ನಿಂದ ಏಕೆ ಅಲ್ವ. ನಾ ನಿಮಗೆಹೇಳಬೇಕಿದ್ದ ಎಲ್ಲವನ್ನು ಸದ್ಯ ನನ್ನಲ್ಲೇ ಉಳಿಸಿಕೊಂಡಿರುವೆ ಸುಮ್ಮನೆˌ ನಾ ಹೇಳಿ ನಿಮ್ಮ ಇಷ್ಟಗಳು ಬೇರೆನೆ ಇದ್ದರೆ ಏಕೆ ಅಂತ. ತುಂಬ Practical ಜೀವನ ನಿಮ್ಮದು ಬಂದದ್ದನ್ನು ಬಂದಂತೆಯೇ ಸ್ವೀಕರಿಸುವ ಹಾಗೆˌ ಅದು ಒಳ್ಳೆಯದೆ. ರಪ್ ಅಂತ ಮುಖದ ಮೇಲೆ ಯಾರೋ ಹೊಡದಂತೆ ಭಾಸ ನನಗೆˌ ಅಂತರಂಗದಲ್ಲಿ ಏನಾಯಿತು ನಿನಗೆ ಜೀವನ ಉದ್ದಕ್ಕು ಜಾಸ್ತಿ ನೋವೆ ಕಂಡಿರುವೆˌ ಅವರಿಗೆ ಹೇಳಿ ಎಲ್ಲವನ್ನು ಇನ್ನಾದರು ಖುಷಿˌ ನೆಮ್ಮದಿಯಿಂದ ಅವರೊಟ್ಟಿಗೆ ಇರುತ್ತಿಯ ಅಂತ ಭಾವಿಸಿದೆ ಆದರೆ ಹೀಗಾಯಿತ್ತಲ್ಲ ಉತ್ತರವಿಲ್ಲದ ಹಾಗೇ. ಇಷ್ಟೆ ಹಣೆಯಬರಹˌ ಜೀವನದ ಆಯಾಮ ಬದುಕು ಹೇಗೆ ಕರೆದುಕೊಂಡುˌನಡೆಸಿಕೊಂಡು ಹೋಗುತ್ತೋ ಹಾಗೇˌ ಮರೆಯದಿರು.

ನಾ ನೀರವ ಮೌನಿಯಾಗಿರುವೆ ಜೀವನದ
ವಾಸ್ತವಿಕತೆಯಲ್ಲಿˌ ತಾಳ್ಮೆಯಿಂದ ಇರುವೆ ನೀ ಹೇಳಿರುವ ಎಲ್ಲವನ್ನು ಪಾಲಿಸಿಕೊಂಡು ಮುನ್ನುಗುವೆ. ಸದಾ ನಿನ್ನ ನೆನಪಿನ ಅಂಕಣದಲ್ಲಿˌ ನಿನ್ನ ನೆನಪಿನ ಆಯಾಮದಲ್ಲಿˌ ನಿನ್ನಾಗಮನಕ್ಕೆ ಕಾಯುತ್ತಿರುವೆ ಸದಾˌ ಆದರೆ ನೀ ಬರೋಲ್ಲ ಅನೋದೆ ಬೇಸರ. ಖುಷಿಯಾಗಿರುˌ ಆರಾಮಾಗಿರು ನಿಮ್ಮ ಇಚ್ಛಾನುಸಾರ ಬಾಳಿನಲ್ಲಿ.

ಮನಸ್ಸು ಭಾರವಾಗಿದೆˌ ಏಕೋ ಕಣ್ಣಿಂಚಿನಲ್ಲಿ ನೀರು ಎಂದಿಗೂ.

🙁😓😪


- ಹಿತೈಷಿ



Saturday, April 4, 2020

ಹೃದಯಹೇಳಿದೆನೀನನ್ನಜೀವನದಆಯಾಮ

ಕ್ಷಣಿಕದ ಬದುಕಿನ ಈ ಜೀವನದ ಎಲ್ಲ ಹೊರಟ ನಡುವೆ ಆಗಿರುವುದು ಒಂದು ಬಂಧ ಅದುವೇ ಅನುಬಂಧˌ ಅದು ಎಷ್ಟು ಚೆಂದ. ಆ ಅನುಬಂಧವ ಏನು ಅಂತಾ ಹೇಳಲಿˌ ಆಕಸ್ಮಿಕವೋˌ ಅನಿರೀಕ್ಷಿತವೋˌ ನಿಶ್ಚಯವೋˌ ವಿಸ್ಮಯವೋ ಒಂದು ತಿಳಿಯುತ್ತಿಲ್ಲ. ಆ ಬಂಧನವು ಅತಿ ಮುಖ್ಯವಾದ ಆಯಾಮ ನನ್ನ ಜೀವನದ ಪಯಣದಲಿ ಜೋಪಾನವಾಗಿ ಕಾಪಾಡಲೇಬೇಕು ಅದನ್ನು ಎಂದೆಂದಿಗೂ. ಬಂಧನದ ಬಂಧುವೂ ಎಷ್ಟು ಚೆಂದˌ ಎಷ್ಟು ಚೇಷ್ಟೆˌ ಅಷ್ಟೆ ಮೃದು ಸ್ವಭಾವಿˌ ಸೂಕ್ಷ್ಮ ಜೀವಿˌ ಬಹಳ ಪ್ರೀತಿˌ ಅಷ್ಟೆ ಕೋಪˌ ಅಷ್ಟೆ ಹಠˌ ಅಷ್ಟೆ ಸಹನೆˌ ಹಡೆಗಾರ್ತಿˌ ಮಾರ್ಗದರ್ಶಕಿˌ ತಿದ್ದುತೀಡುವಿಕೆˌ ವಾತ್ಸಲ್ಯದಾತೆˌ ಮುಗ್ಧತೆಯ ಸ್ವರೂಪಿˌ ಸ್ವಲ್ಪ ಲೂಸುˌ ಸ್ನೇಹ ಜೀವಿ, ಜೀವನದ ಪರಿಪೂರ್ಣತೆಯೆ ನೀˌ ತಾಯಿಯಂತ ಮನಸ್ಸುˌ ತಂದೆಯಂತ ಹೃದಯವಂತಿಕೆ. ನಾವು ಜೊತೆಯಲಿ ಇರೋಣ ಎಂದೆಂದಿಗೂ ಇರುವವರಿಗೂˌ ಕಷ್ಟ-ಸುಖˌ ನೋವು-ನಲಿವಿನೊಂದಿಗೆˌ  ಏನೇ ಆದರೂ ಸಮತೋಲನವಾಗಿ ನನಗೆ ನೀ-ನಿನಗೆ ನಾ ಅಂತˌ ನಿಸ್ವಾರ್ಥವಾಗಿ. ಎಷ್ಟೆˌ ಎಂಥಾಹ ಮುನಿಸಿದ್ದರು ನಮ್ಮ ನಡುವಲಿ ಅಷ್ಟೆ ಬಾಂಧವ್ಯಯಾವಾಗಲೂˌ ನನ್ನ ತಾಯಿ ಜೊತೆ ನೀ ಸಹ ಜೀವನದ ಎಲ್ಲವು ನೀನೆ ಆಗಿಯೆˌ ನೋಡಿಕೊಳ್ಳುವೆ ನನ್ನ ತಾಯಿಯ ಹಾಗೆ ನೀ ಬಂದರೆ ಬದುಕಿಗೆˌ ತಿರಿಸಲು ಸಾಧ್ಯವಾ ನಿನ್ನ ಹೃದಯವಂತಿಕೆಯ ಋಣ. ಋಣದ ಭಾರ ಇಳಿಸಲು ನಿಮ್ಮ ಕೂಡು ಕುಟುಂಬದಲ್ಲಿ ಸೇರಲು ಇಚ್ಛೆˌ ಒಂದು ಅವಕಾಶ ಮಾಡಿ ಕೊಡುವೆಯಾ? ಜೀವನದ ಎಲ್ಲವನ್ನು ಹೇಳಿರುವೆ, ಜೊತೆಗೆ ಕಾದಿರುವುದು ಮನ ನಿನ್ನಾಗಮನಕ್ಕೆ ಎಂದೆಂದಿಗೂˌ ನಿನ್ನಿಂದ ಏನು ನಿರೀಕ್ಷೆಯಿಲ್ಲ ಎಂದಿಗೂˌ ನೀ ಬಂದರೆ ಅಷ್ಟೆ ಸಾಕಲ್ಲ ಬದುಕಿಗೆ.
ನಮ್ಮ ನೆನಪೊಂದು ಉಳಿಯಲಿ ನೆನಪಿನ ಬುತ್ತಿಯಲಿ ಯಾರಿಗೂ ತಿಳಿಯದ ಬದುಕಿನ ಹೋರಾಟದಲ್ಲಿ, ಬಾಳಿ ಹೋಗುವ ಬಾ ಇರುವವರಿಗೂ ಜೊತೆಯಲಿ.


ಜಾನೂ...


                                        ❤️