ಕ್ಷಣಿಕದ ಬದುಕು ಏನೋ ಗೊತ್ತಿಲ್ಲ ಹೇಗೆಂದುˌ ಇದು ಇಂದಿನ ಬದುಕು ಅನುಭವಿಸಬೇಕು ಬೇಕೆಂದರೂ ನಾಳೆ ಸಿಗದುˌ ಅಷ್ಟು ಪರಿಚಯವಿದ್ದರು ಜಗದೊಳು ಎಲ್ಲ ತುಂಬ ವಿರಳವಾದ ಬದುಕು ಎಂತಾ ವಿಚಿತ್ರ ಅನಿಸುತ್ತದೆˌ ನೀ ತಿಳಿಸಿ ಹೇಳಿದ ಎಲ್ಲವನ್ನು ಅರ್ಥಮಾಡಿಕೊಳ್ಳುತ್ತಿರುವೆನು ನಾˌ ನೀ ಬಂದು ತಿದ್ದಿˌ ತೀಡಿˌ ತಿಳಿಸಿˌ ಹೇಳಿಕೊಡು ಈ ಹುಡುಗನಿಗೆ ಜೀವನದ ಮತ್ತಷ್ಟು ಪಾಠವ. ನೀ ಹೇಳಿಕೊಡುವ ತಪ್ಪು ಒಪ್ಪುಗಳ ನಡುವೆ ಬದುಕು ನಡೆದಿದೆ. ನೀ ಸದಾ ಹೇಳುವ ಹಾಗೆ ಭಗವಂತ ಇಚ್ಛೆ ಏನಿದೆಯೋ ಅದೆ ಆಗುತ್ತದೆಂದುˌ ಅದು ಅಕ್ಷರ ಸಹ ಸತ್ಯ ಆದರೆ ನಾ ಕೂಡ ಸದಾ ಹೇಳುತ್ತಿರುವೆ ಭಗವಂತನೇ ನಿಮ್ಮನ್ನು ಕಳುಹಿಸಿರುವುದೆಂದು. ನನ್ನ ಮನˌ ಜೀವನ ನಿನಗೆ ಎಂದೆಂದೂ ಸಮರ್ಪಿತˌ ನೀ ಎಂದು ಪರಕೀಯಳಲ್ಲ ಈ ಜೀವಕ್ಕೆ ಜೀವನಕ್ಕೆˌ ಈ ಬದುಕ ಮುನ್ನುಡಿ ನೀ ಸದಾˌ ನನ್ನಸಿರ ಏರಿಳಿತಗಳು ನೀನೆ ಆಗಿಯೇˌ ನೀನಿರದೆ ಈ ಬಾಳ ಪಯಣದಲಿ ನಾ ಇರ್ತಿನಿ ಇಲ್ಲವೊ ಎಂಬ ಭಾಸವಾಗಿದೆ. ನಿದ್ದೆಯಲ್ಲೂ ಸಹ ನಿನ್ನದೆ ಕನವರಿಕೆˌ ನನ್ನ ಎಲ್ಲವೂ ನೀ ಆಗಿಹೇ ಅಮ್ಮನ ಜೊತೆಗೆˌ ನಿನ್ನನುಪಸ್ಥಿತಿ ಕಾಡಿದೆ. ಇದು ಯಾವುದು ಕಲ್ಪನೆಯು ಅಲ್ಲˌ ಆಸೆಯಂತು ಮೊದಲೇ ಇಲ್ಲˌ ನನ್ನ ವಾಸ್ತವಿಕತೆಯ ರೂಪವಿದು. ಆದರೆ ಬಲವಂತವೆನಿಲ್ಲ ಹೇಳಿದ ಹಾಗೆˌ ತಿಳಿದಿರುವೆ ನಿಮ್ಮದು ಜೀವನವಿದೆ ಆಸೆˌ ಆಕಾಂಕ್ಷೆ ಬಹಳವಿರುತ್ತದೆಂದು. ನೀನಿರದೆ ಹೋದರೆ ಬೇಸರವಾಗುವುದಿಲ್ಲ ಅಂತೇನಿಲ್ಲ ಆದರು ಸುಮ್ಮನಿರುವೆ ಮೌನಿಯಾಗಿˌ ಕಾದಮೇಲೂ ಹೀಗೆ ಈ ಮೌನ ಸದಾ ಮೌನದಿಂದಿರುವೆ ಇಚ್ಛೆಯೇ ಎಂದಿಗೂ.
ಮೂಡಣದಲಿ ರವಿ ಮೂಡಿ ಬರಲು ನನ್ನ ಮನಕ್ಕೆ ನೀ ಬೆಳಕತರಲುˌ ತಂಪಾದ ಗಾಳಿ ಬಿಸುತ್ತಿರಲು ನೀ ಬದುಕ ಪ್ರವೇಶಿಸಲುˌ ಕೋಗಿಲೆಯ ಇಂಪಾದ ಧ್ವನಿ ಕೇಳಿಬರಲು ನೀ ಮಾತನಾಡುತಿರಲುˌ ಎಲ್ಲ ಕ್ಷಣಕ್ಕೂ ನೀ ತೋರಿದ ನಿಮ್ಮ ಹೃದಯವಂತಿಕೆಯ ಮನಕೆ ಎಷ್ಟು ಋಣಿಯೇ ಗೊತ್ತಿಲ್ಲ.!!
#ಹೃದಯವೆಹೇಳಿದೆನೀನನ್ನಜೀವನದಆಯಾಮ
No comments:
Post a Comment
Note: Only a member of this blog may post a comment.