ಮನವೆಂಬ ಆಗಸಕೆ ಆಲೋಚನೆಯ ಎಂಬ ಕಲ್ಲು ಎಸೆದು ಪೂರ್ವದಲ್ಲಿ ಒಮ್ಮೆಯಾದರು ಯೋಚಿಸು ಮನವೇ ಬದುಕು ಏಕೆ ಹೀಗೆಂದು. ಪ್ರತಿಕ್ಷಣವು ನಿನ್ನೆ ಯೋಚಿಸುವ ನನಗೆ ಮನಃಪೂರ್ವಕವಾಗಿ ನಿನ್ನೊಡನಾಟದ ಕಲ್ಪನೆಗಳೇ ಮನದ ತುಂಬ. ಭಾವನೆಯ ಜೀವನವಲ್ಲ ಈ ಬದುಕು ಕನಸಲ್ಲ ನನಸಾಗಲಿಕ್ಕೆˌ ಇದು ಬಂಧ ಒಂದು ಸುಂದರ ಅನುಬಂಧ ವಾಸ್ತವದ ರೂಪ ಅನಿಸಿದೆ. ಒಂದಿಷ್ಟು ಮುನಿಸು ಯಾವಾಗಲುˌಹೊಂದಾಣಿಕೆ ಅನಿಸುತ್ತೆˌ
ಕಾಳಜಿˌನಂಬಿಕೆˌ ಪ್ರೀತಿˌ ಸಲುಗೆˌ ಬಹಳ ಹಡೆˌ ಅನಿವಾರ್ಯತೆ ನಡುವೆ ತುಂಬ ನಿರೀಕ್ಷೆಗಳಿಲ್ಲದ ಬದುಕು ನಮ್ಮದಾಗಲಿ ಸದಾˌ ಜೊತೆಗೆ ಸ್ನೇಹ-ಪ್ರೀತಿ ಯಾವಾಗಲು ಬೇಡುವ ಭಿಕ್ಷೆಯಾಗಬಾರದಂತೆˌ ಗೌರವವಾಗಬೇಕು. ಆದರೆ ನಾ ನಿನ್ನೆಯ ಪ್ರೀತಿಯ ಭಿಕ್ಷೆಯ ಕೇಳುತ್ತಿರುವ ಭಿಕ್ಷುಕ ಅಷ್ಟೆ. ಆದರು ನೀ ಏಕೆ ಹೀಗೆ ಕಾಡುವೆ ಅರ್ಥಮಾಡಿಕೊಂಡು ಬಂದು ಬಿಡಬಾರದೆ ಸತಾಯಿಸದೆ ಈ ಹುಡುಗನ ಮನೆಯ ಬೆಳಕಾಗಿˌ ಅವನ ಬಾಳಿಗೆ ಬಾಳಸಂಗಾತಿಯಾಗಿ.
ನಿನ್ನ ಆಗಮನದ ಕಾತುರ ಬಹಳವಾಗಿದೆ.
ನಿನಗೆಂದೇ ಕಾದಿರುವೆ ಈ ಬದುಕಿನ ಪಯಣದಲಿˌ ನೀ ಬರುವ ನಿರೀಕ್ಷೆಯಲಿ...!
#ಹೃದಯವೆಹೇಳಿದೆನೀನನ್ನಜೀವನದಆಯಾಮ
No comments:
Post a Comment
Note: Only a member of this blog may post a comment.