ಮೌನದ ಪ್ರಪಂಚವೇ ಚೆಂದ ಯಾರೊಡನೆಯೂ ಅಷ್ಟೊಂದು ಮಾತಿಲ್ಲˌ ಕಥೆಯಿಲ್ಲˌ ನಗುವಿಲ್ಲˌ ಅಳುವಿಲ್ಲˌ
ನೆನಪಿನಂಗಳವಷ್ಟೆ. ಜೀವನೋತ್ಸಾಹˌ ಜುಗುಪ್ಸೆಗಳು ಗೊತ್ತಗುತ್ತಿಲ್ಲ ಏನೋ ಬದುಕಿದ್ದರು ಸತ್ತಂತೆಯಿದೆ ಜೀವˌ ಜೀವನ ಉದ್ದಕ್ಕೂ ನೋವು- ನಲಿವು ಅಲ್ಲಿ ಅಂದುಕೊಂಡಿದ್ದುˌ ಅಂದುಕೊಳ್ಳುವುದು ಯಾವುದಿಲ್ಲ. ಬದುಕಿನ ಜೀವನ full oscillatingˌ like windows door close open close open, ಟಪಟಪ ಟಪಟಪ ಅಂತ. ಮನವೂ ಹೆಚ್ಚು ಭಾರವಾಗಿ ಹೋಗಿದೆ ಮನಸ್ಸಿನ ಮನವು ಸೋತಿದೆˌ ಅದು ಉಳಿಯಬಲ್ಲದೆ..!?ಬದುಕ ಉಳಿಸಬಲ್ಲದೆ..!? ಪ್ರಶ್ನೆಗೆ ಉತ್ತರವಿಲ್ಲ ಎಂಬಂತಾಗಿದೆˌ ಏನೂ ಗೊತ್ತಾಗದಂತಾಗಿದೆ.
ಪೂರ್ವಚಂದ್ರ ತೇಜಸ್ವಿರವರು ಹೇಳಿರುವಂತೆˌ "ಮಾತನಾಡುವಷ್ಟೇ ಮಾತನಾಡದೆ ಇರುವುದೂ ಅಗತ್ಯ ಅವಾಗ ನಮ್ಮ ಮಾತಿಗೆˌ ಮೌನಕ್ಕೆ ಅರ್ಥಬರುತ್ತದೆ".
ಈ ಬದುಕು ದ್ವಂದ್ವಮಯವಾಗಿದೆˌ ಅವರಿಸಿದ ಮೌನವೇ ನೀನೆಷ್ಟು ಚೆಂದ.