ಕನಸಾಗೆ ಉಳಿದಳು ಜೀವನದ ಕಾಲಘಟ್ಟದಲ್ಲಿ.!?😓😓😓
ನಾ ಅಂದುಕೊಂಡ ಹಾಗೆ ಜೀವನದಲ್ಲಿ ಏನು ನಡೆಯುತ್ತಿರಲಿಲ್ಲ, ಜೀವನದಲ್ಲಿ ದೊಡ್ಡ ಕಹಿ ಘಟನೆ ಇತ್ತೀಚಿಗೆ ಅಂದರೆ ಏಳು ತಿಂಗಳಿಂದೆ ಅಪ್ಪನ ಕಳೆದುಕೊಂಡಿದ್ದು. ಬದುಕು ಹೇಗೆ ಕರೆದುಕೊಂಡು ಹೋಗುತ್ತೋ ಹಾಗೆ ಹೋಗಬೇಕೆಂಬುದು ಅಷ್ಟೆ ಅಲ್ವ ಅಂತಿದ್ದೆ. ನೀ ಹಾಗೆ ಬಂದೆ ತಿಳಿಯದೆˌನೋವಿನಲ್ಲಿ ಇದ್ದ ನನಗೆˌನೀ ಹೇಳಿದ ಸಾಂತ್ವನˌಧೈರ್ಯˌಜೊತೆಗೆ ಆ ನಿಮ್ಮ ಮಾತುಗಳುˌ ಅಂಕಣಗಳು ನನಗೆ ಯಾವಾಗಲು ಬಹಳ ಜೀವ ತುಂಬಿದೆ. ಆದರೆ ಜೀವನದಲ್ಲಿ ಅದನ್ನು ತಿಳಿದ್ದಿದರುˌ ಅನುಭವಿಸಿದ್ದರು ಏನೋ ಅತಿಯಾದ ಒಂದು ಬಂಧವ ಅನುಬಂಧವ ನನ್ನಲ್ಲೇ ಬೇಳೆಸಿ ಪೋಷಿಸಿದೆˌ ನಿನಗೆ ನೇರವಾಗಿ ತಿಳಿಸದೆ ಇದ್ದರುˌ ಅದನ್ನೂ ನೀ ಅರಿತು ಸುಮ್ಮನೆ ಇರುವೆಯಲ್ಲ ಅರಿವಿದ್ದರು ಅರಿವಿಲ್ಲದ ಹಾಗೆ. ನೀ ಹೇಳುವ ಹಾಗೆˌ ಆಪ್ತರು ಹೇಳುವ ಹಾಗೆ ನನ್ನ ಅತಿಯಾದ ಚಿಂತನೆˌ ನನ್ನ ತಪ್ಪುಗಳನ್ನು ಬಂದು ತಿದ್ದುತೀಡುತ್ತಿಯೆˌನನ್ನ ಬದುಕಿನಲ್ಲಿ ಬದಲಾವಣೆ ತರುತ್ತಿದ್ದ ನೀನುˌಮುಂದೇನು ತರುತ್ತಿಯ ಎಂದೆ ಭಾವಿಸಿದ್ದೆ. ನನಗೋ ಜೀವನದ ಆಯಾಮದಲ್ಲಿ ನನ್ನ ತಾಯಿ ಜೊತೆ ನೀ ಸಹ ಜೀವನದ ಎಲ್ಲವು ನೀನೆ ಆಗಿಯೆ. ಬದುಕಿನ ಬಂಧವ ಅನುಬಂಧವ ಪೋಷಿಸಿದ್ದ ನನಗೆ ಇದ್ದಿದ್ದು ಒಂದೇ ಅವರು ಬದುಕಿನಲ್ಲಿ ಜೊತೆಯಾಗಿರಬೇಕು ಹಾಗೆ ಜೋಪಾನವಾಗಿ ಕಾಪಾಡಲೇಬೇಕೆಂಬ ಹಠ ತೊಟ್ಟಿದುˌಆದರೆ ಎಲ್ಲವೂ ಏನೋ ಹುಸಿಯಾದಂತಿದೆ.
ಇಷ್ಟೆˌ ನಿನ್ನಲ್ಲಿ ಸಣ್ಣ ಬದಲಾವಣೆ ಕಂಡಿಯೆ ಎರಡು ದಿನಗಳಿಂದ ಈಚೆಗೆ ಏಕೋ ಗೊತ್ತಿಲ್ಲˌ ಕೇಳಿದರೆ ನೀ ಉತ್ತರವಿಲ್ಲ ನನ್ನಲ್ಲಿ ಅಂದಿಯೆ. ದೂರವಿರು ಅಂತ ಏನೋ ಮಾತಿನ ಭಾವದಲ್ಲಿ ಎಲ್ಲವನ್ನು ತಿಳಿಸಿಯೆ ಎನ್ನುವ ಭಾಸˌಏನೋ ನನಗೆ ಒಂದು ಅರಿವಿಲ್ಲˌ ನಿನ್ನ ಮಾತಿನ ಧಾಟಿˌ ನಿರೀಕ್ಷೆಯಿಲ್ಲದ ಸ್ವಭಾವ ತೋರಿದೆˌ ಸಿಡಿಲು ಬಡೆದಂತಾಯಿತು ನನಗೆ ಮನದಲಿˌ ಆದರೆ ಉತ್ತರವಿಲ್ಲ ಅಂದಿಯೆˌ ಅದೇನೋ ಈ ರೀತಿ ಹೇಳಿದೆ everything ll okˌ ಇನ್ನು ಏನೇನೋ ಹೇಳಿದೆ. ಅದರೆ ನೀ ಹೇಳಿದೆ ಪ್ರಶ್ನೆಗಳಿದೆ ಅಂತ.? ಆದರೂ ಪ್ರಶ್ನೆ ಸಹ ಬರಲಿಲ್ಲˌ ಜೊತೆಗೆ ನನ್ನಿಂದ ತೊಂದರೆ ಅಗುತ್ತಿದೆ ನಿನಗೆ ಅಲ್ವ ಅಂತ ಮಾತು ಬಂತುˌನೀ ಈ ರೀತಿ ಮುಂಚೆ ಹೀಗೆ ಇರಲಿಲ್ಲˌ ಮಾತು ಸಹ ನಾ ಕಂಡಂತೆ ಈ ತರಹ ಆಡಿರಲಿಲ್ಲ ಖಂಡಿತವಾಗಿˌ ಸತ್ಯವಾಗಿ. ನಿನಗೆ ನಾನೇ ತೊಂದರೆ ಕೊಡುತ್ತಿರುವ ಹಾಗೇ ಕಾಡುತ್ತಿದೆ ನನ್ನಲ್ಲಿ. ತಿಳಿದಿಯೆ ನಿಮಗೂ ನಿಮ್ಮ ಜೀವನವಿದೆ ಎಂದುˌ ಬದುಕಿನಲ್ಲಿ ಇಚ್ಛೆˌ ಇಷ್ಟೆ ಇದ್ದೆ ಇರುತ್ತದೆ ಎಂದುˌಮೊದಲೇ ಈ ರೀತಿ ಮಾತು ಆಡಿದ್ದಿರೀˌ ತೊಂದರೆ ನನ್ನಿಂದ ಏಕೆ ಅಲ್ವ. ನಾ ನಿಮಗೆಹೇಳಬೇಕಿದ್ದ ಎಲ್ಲವನ್ನು ಸದ್ಯ ನನ್ನಲ್ಲೇ ಉಳಿಸಿಕೊಂಡಿರುವೆ ಸುಮ್ಮನೆˌ ನಾ ಹೇಳಿ ನಿಮ್ಮ ಇಷ್ಟಗಳು ಬೇರೆನೆ ಇದ್ದರೆ ಏಕೆ ಅಂತ. ತುಂಬ Practical ಜೀವನ ನಿಮ್ಮದು ಬಂದದ್ದನ್ನು ಬಂದಂತೆಯೇ ಸ್ವೀಕರಿಸುವ ಹಾಗೆˌ ಅದು ಒಳ್ಳೆಯದೆ. ರಪ್ ಅಂತ ಮುಖದ ಮೇಲೆ ಯಾರೋ ಹೊಡದಂತೆ ಭಾಸ ನನಗೆˌ ಅಂತರಂಗದಲ್ಲಿ ಏನಾಯಿತು ನಿನಗೆ ಜೀವನ ಉದ್ದಕ್ಕು ಜಾಸ್ತಿ ನೋವೆ ಕಂಡಿರುವೆˌ ಅವರಿಗೆ ಹೇಳಿ ಎಲ್ಲವನ್ನು ಇನ್ನಾದರು ಖುಷಿˌ ನೆಮ್ಮದಿಯಿಂದ ಅವರೊಟ್ಟಿಗೆ ಇರುತ್ತಿಯ ಅಂತ ಭಾವಿಸಿದೆ ಆದರೆ ಹೀಗಾಯಿತ್ತಲ್ಲ ಉತ್ತರವಿಲ್ಲದ ಹಾಗೇ. ಇಷ್ಟೆ ಹಣೆಯಬರಹˌ ಜೀವನದ ಆಯಾಮ ಬದುಕು ಹೇಗೆ ಕರೆದುಕೊಂಡುˌನಡೆಸಿಕೊಂಡು ಹೋಗುತ್ತೋ ಹಾಗೇˌ ಮರೆಯದಿರು.
ನಾ ನೀರವ ಮೌನಿಯಾಗಿರುವೆ ಜೀವನದ
ವಾಸ್ತವಿಕತೆಯಲ್ಲಿˌ ತಾಳ್ಮೆಯಿಂದ ಇರುವೆ ನೀ ಹೇಳಿರುವ ಎಲ್ಲವನ್ನು ಪಾಲಿಸಿಕೊಂಡು ಮುನ್ನುಗುವೆ. ಸದಾ ನಿನ್ನ ನೆನಪಿನ ಅಂಕಣದಲ್ಲಿˌ ನಿನ್ನ ನೆನಪಿನ ಆಯಾಮದಲ್ಲಿˌ ನಿನ್ನಾಗಮನಕ್ಕೆ ಕಾಯುತ್ತಿರುವೆ ಸದಾˌ ಆದರೆ ನೀ ಬರೋಲ್ಲ ಅನೋದೆ ಬೇಸರ. ಖುಷಿಯಾಗಿರುˌ ಆರಾಮಾಗಿರು ನಿಮ್ಮ ಇಚ್ಛಾನುಸಾರ ಬಾಳಿನಲ್ಲಿ.
ಮನಸ್ಸು ಭಾರವಾಗಿದೆˌ ಏಕೋ ಕಣ್ಣಿಂಚಿನಲ್ಲಿ ನೀರು ಎಂದಿಗೂ.
🙁😓😪
- ಹಿತೈಷಿ